Harihar August 30, 2014 : On August 30, 2014 was given grant start for the annual feast of Our Lady of Health at Harihar. The ceremony was begun with the flag hoisting by Most Rev. Dr. Francis Serrao the Bishop of Shimoga. During the Flag hoisting Bishop said as the flag rises high and flies high so must our devotion to Mary rise day by day. After the Eucharist celebration Bishop launched Harihar Shrine official website and inaugurated Shrine Museum in the presence of Rev. Fr. Stany D’Souza, the Parish Priest; Rev. Fr. Clarence Dais, the Chancellor of the Diocese of Shimoga and other priests, Religious, Architect of the Museum Mr. Tyren Roche, Mr. Denis Roche and a large crowd of the faithful.
HARIHAR ANNUAL FEAST FLAG HOISTING :
ಹರಿಹರ ಆರೋಗ್ಯ ಮಾತೆ ಮಹೋತ್ಸವಕ್ಕೆ ಅದ್ದೂರಿ ಚಾಲನೆ, ಪೂಜ್ಯ ಧರ್ಮಾಧ್ಯಕ್ಷರಿಂದ ಧ್ವಜಾರೋಹಣ.
Harihar, August 30, 2014
ಸೆಪ್ಟೆಂಬರ್ 8 ರಂದು ನಡೆಯಲಿರುವ ಹರಿಹರ ಆರೋಗ್ಯ ಮಾತೆಯ ಮಹೋತ್ಸವಕ್ಕೆ ಅದ್ದೂರಿ ಚಾಲನೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಧ್ವಜಾರೋಹಣ ಮಾಡುವುದರ ಮೂಲಕ ಆರಂಭಸಿದರು. ಆರಂಭದಲ್ಲಿ ಹರಿಹರ ಮಾತೆಯ ಧ್ವಜವನ್ನು ಆಶೀರ್ವದಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಪ್ರತಿಯೊಬ್ಬರಲ್ಲಿ ಹರಿಹರ ಮಾತೆಯ ಭಕ್ತಿಯು ಈ ಧ್ವಜವು ಹೇಗೆ ಉತ್ತುಂಗಕ್ಕೆ ಏರಿ ಹೋಗಿ ತನ್ನ ಘನತೆಯನ್ನು ವ್ಯಕ್ತಪಡಿಸುತ್ತದೋ ಹಾಗೆ ಭಕ್ತಿಯು ವೃದ್ದಿಸಬೇಕು ಎಂದು ಕರೆ ನೀಡಿದರು. ಮಹೋತ್ಸವಕ್ಕೆ ಆಗಮಿಸಿರುವ ಎಲ್ಲಾ ಭಕ್ತಾಧಿಗಳಿಗೆ ಶುಭ ಹಾರೈಸಿದರು. ನಂತರ ವಿಶೇಷ ದಿವ್ಯಬಲಿ ಪೂಜೆಯನ್ನು ಸಮರ್ಪಿಸಿದರು. ಇವರೊಂದಿಗೆ ಸುಮಾರು ಹತ್ತಕ್ಕೂ ಹೆಚ್ಚು ಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಬಲಿಪೂಜೆಯ ನಂತರ ಹರಿಹರ ಪುಣ್ಯಕ್ಷೇತ್ರದ ವೆಬ್ ಸೈಟ್ www.hariharshrine.org ಮತ್ತು ಮ್ಯೂಜಿಯಂ ಕಿರು ಚಿತ್ರಮಂದಿರ ಮತ್ತು ಪುಣ್ಯಕ್ಷೇತ್ರದ ಶಾಸನವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪುಣ್ಯಕ್ಷೇತ್ರದ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜ, ಫಾದರ್ ಕ್ಲಾರೆನ್ಸ್ ಡಯಾಸ್, ಫಾದರ್ ರೋಮನ್ ಪಿಂಟೋ, ಫಾದರ್ ರಾಬರ್ಟ್, ಇವರು ಸೇರಿದಂತೆ ಅನೇಕ ಗುರುಗಳು, ಧರ್ಮಭಗಿನಿಯರು ಈ ದಿವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು, ವೆಬ್ ಸೈಟ್ ವಿನ್ಯಾಸಕರಾದ ಫಾದರ್ ಕ್ಲಾರೆನ್ಸ್, ಮೂಜಿಯಂ ವಿನ್ಯಾಸಕರಾದ ಶ್ರೀ. ಟೈರನ್ ರೋಚ್, ಶ್ರೀ. ಡೆನ್ನಿಸ್ ರೋಚ್, ಕಿರು ಚಿತ ಮಂದಿರದ ವಿನ್ಯಾಸಕರಾದ ಶ್ರೀ ಕ್ರಿಷ್ಣ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಕ್ತಿಭಾವದಿಂದ ಹಾಜರಿದ್ದರು. ವೆಬ್ ಸೈಟ್ ಬಗ್ಗೆ ಮಾಹಿತಿಯನ್ನು ಲೇಖಕ ಡಾ. ಡಿ.ಪ್ರಾನ್ಸಿಸ್ ಕ್ಸೇವಿಯರ್ ಇವರು ಮಾಡಿ ಕೊಟ್ಟರು.