ದಯಾನಂದ ವರ್ಣೇಕರ್, ದಾವಣಗೆರೆ ನಿವಾಸಿಗಳು. ನಮ್ಮ ಮಗನಾದ ನಿಕಿಲ್ ಡಿ.ವಿ. (10 ವರ್ಷ) ಕಣ್ಣಿನ ತೊಂದರೆಯಿಂದ ತುಂಬಾ ನೋವು ಅನುಭವಿಸುತ್ತಿದ್ದನು. ಇದಕ್ಕಾಗಿ ನಾವು ದಾವಣಗೆರೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿದಾಗ ಈತನಿಗೆ ‘ಕೊರ್ನೆಯ’ ಸಮಸ್ಯೆ ಇದೆ, ಆಪರೇಷನ್ ಮಾಡಿಸಬೇಕು ಎಂದು ಹೇಳಿದರು. ನಮಗೆ ತುಂಬಾ ವ್ಯಥೆಯಾಯಿತು. ಚಿಕ್ಕ ಹುಡುಗನಿಗೆ ಹೇಗೆ ಅಪರೇಷನ್ ಮಾಡಿಸುವುದು ಎಂದು ಮನಸ್ಸಿಗೆ ತುಂಬಾ ನೋವಾಯಿತು. “ಆಪರೇಷನ್ ಇಲ್ಲದೆಯೇ ಮಗನನ್ನು ಗುಣಪಡಿಸಮ್ಮ”, ಎಂದು ಹರಿಹರ ಮಾತೆಯ ಬಳಿ ಅಂಗಲಾಚಿ ಬೇಡಿದೆವು.ಮಾತೆಯು ನಮ್ಮ ಪ್ರಾರ್ಥನೆಯನ್ನು ಆಲಿಸಿದರು. ಸುಮಾರು ಮೂರುವರೆ ವರ್ಷಗಳಿಂದ ಕಣ್ಣಿನ ತೊಂದರೆಯಿಂದ ನರಳುತ್ತಿದ್ದ ನನ್ನ ಮಗ ನಿಕಿಲನು ಗುಣಮುಖನಾದನು. ನಾವು ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ತಪಾಸಣೆ ನಡೆಸಿದಾಗ ಅವನಿಗೆ ಯಾವ ಸಮಸ್ಯೆಯೂ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು. ನಮ್ಮ ಹರಕೆಯಂತೆ ಚಿನ್ನದಿಂದ ಮಾಡಿರುವ ಕಣ್ಣಿನ ಎರಡು ಪ್ರತಿರೂಪಗಳನ್ನು ಮಾತೆಗೆ ಹರಕೆ ಕಾಣಿಕೆಯಾಗಿ ಕೊಟ್ಟಿರುತ್ತೇವೆ. ಹರಿಹರ ಮಾತೆಯು ನಮ್ಮ ಮಗನಿಗೆ ಮಾಡಿರುವ ಈ ಅದ್ಭುತಕ್ಕಾಗಿ ಮಾತೆಗೆ ವಂದನೆಯನ್ನು ಸಲ್ಲಿಸುತ್ತೇವೆ.
- ದಯಾನಂದ ಡಿ. ವರ್ಣೇಕರ್
ದಾವಣಗೆರೆ
Sight restored without an Operation
We are the inhabitants of Davanagere . My Son, Nikhil D V (10 yrs) had problem in the cornea of his eyes and was due for an eye operation . The pain which he had to undergo during the operation troubled us . We trusted in the intercession of Mother Mary and prayed incessantly . My Son got cured of his ailment and at Narayana Eye care centre , Bangalore. They certified that he has no problem in the eye. We vowed to offer golden eyes to our lady of health and offered. We are grateful to Harihar Matha for the favours received.
- Dayanand D. Varnekar
Davanagere